ಎದೆಯ ವಿಷ್ಯದಲ್ಲಿ ಈ ತಪ್ಪೆಲ್ಲಾ ಆಗದಂತೆ ಮಹಿಳೆಯರು ಎಚ್ಚರ ವಹಿಸಿ



ಎದೆಯು  ದೇಹದ ಒಂದು ಪ್ರಮುಖ ಭಾಗ.  ಆದರೆ ನಾವು ಕೆಲವೊಮ್ಮೆ ಸ್ತನಗಳೊಂದಿಗೆ ಕೆಲವು ತಪ್ಪುಗಳನ್ನ ಮಾಡುತ್ತೇವೆ. ಡಾಕ್ಟರ್ ಸ್ತನಗಳೊಂದಿಗೆ ಯಾವ ಕೆಲಸಗಳನ್ನು ಮಾಡಬಾರದು ಎಂದು ಇಲ್ಲಿ ಹೇಳಿದ್ದಾರೆ. ಅವುಗಳನ್ನು ಫಾಲೋ ಮಾಡಿದ್ರೆ ಹೆಲ್ದಿ ಜೀವನ ನಿಮ್ಮದಾಗುತ್ತೆ.  ಇದು  ಆರೋಗ್ಯದ ಕಥೆ ಮತ್ತು ಅದಕ್ಕೆ ಅನುಗುಣವಾಗಿ  ಚರ್ಚಿಸಬಹುದು.
 

ಕೆಲವೊಮ್ಮೆ ಎದೆಯ  ಬಗ್ಗೆ ಈ ತಪ್ಪುಗಳನ್ನು ಮಾಡುತ್ತೇವೆ, ಅವುಗಳ ಬಗ್ಗೆ ತಿಳಿಯೋಣ. 

ಎದೆಯು ವಿಭಿನ್ನ ಆಕಾರ ಮತ್ತು ಗಾತ್ರಗಳನ್ನು ಹೊಂದಿರಬಹುದು. ಒಂದು ಸ್ತನ ದೊಡ್ಡದಾಗಿರಬಹುದು ಮತ್ತು ಒಂದು ಚಿಕ್ಕದಾಗಿರಬಹುದು.  ವರ್ಷಕ್ಕೊಮ್ಮೆಯಾದರು   ಸ್ತನ ಪರೀಕ್ಷೆ  ಮಾಡೋದು ಅವಶ್ಯಕ . ಯಾಕಂದ್ರೆ  ಸ್ತನ ಕ್ಯಾನ್ಸರ್ ನ ಆರಂಭಿಕ ರೋಗ ಲಕ್ಷಣಗಳನ್ನು ಸ್ವಯಂ-ಸ್ತನ ಪರೀಕ್ಷೆ ಮೂಲಕ ಬಹಳ ಸುಲಭವಾಗಿ ಕಂಡು ಹಿಡಿಯಬಹುದು. ಸ್ತನದ ಭಾಗ, ಅಂಡರ್ ಆರ್ಮ್  ಮತ್ತು ಕಾಲರ್ ಬೋನ್ ಪರೀಕ್ಷಿಸುವುದು ಬಹಳ ಮುಖ್ಯ. ಏಕೆಂದರೆ ಸ್ತನದ ಸ್ನಾಯುಗಳು ಎಲ್ಲೇ ಇದ್ದರೂ, ಗಡ್ಡೆ, ಒಂದು ರೀತಿಯ ನೋವು, ಯಾವುದೇ ಸ್ರಾವ, ಇತ್ಯಾದಿಗಳು ಇರಬಹುದು.  

ಸರಿಯಾದ ಸೈಜ್ ನ  ಬ್ರಾ ಧರಿಸೋದು ಬಹಳ ಮುಖ್ಯ ಸರಿಯಾದ ಸೈಜ್ ನ ಬ್ರಾ ಧರಿಸದಿದ್ದರೆ, ಅದು  ಸಾಕಷ್ಟು ಹಾನಿ ಉಂಟುಮಾಡಬಹುದು. ತುಂಬಾ ಸಡಿಲವಾದ ಬ್ರಾ ಅಥವಾ ತುಂಬಾ ಬಿಗಿಯಾದ ಬ್ರಾ ಧರಿಸೋದು ಎರಡೂ ಸರಿಯಲ್ಲ. ಇದು  ಸ್ತನದ ಸ್ನಾಯುಗಳಲ್ಲಿ ಸೆಳೆತಕ್ಕೆ ಕಾರಣವಾಗಬಹುದು. ಇದಲ್ಲದೆ, ಬ್ರಾವನ್ನು ಆಗಾಗ್ಗ ತೆಗೆಯುತ್ತ, ಸ್ತನಗಳು ಸ್ವಲ್ಪ ವಿಶ್ರಾಂತಿ ಪಡೆಯಲು ಬಿಡಿ. ಆಗ, ಸ್ತನಗಳು ಸಡಿಲವಾಗೋದಿಲ್ಲ. ಸ್ತನದ  ಬಣ್ಣ ಬದಲಾಯಿಸಲು ಲೈಟನಿಂಗ್ ಕ್ರೀಮ್ ಬಳಸಬೇಡಿ .ಅವು ಸರಿಯಲ್ಲ ಮತ್ತು ಅವುಗಳು ನಿಮಗೆ ಅನೇಕ ರೀತಿಯಲ್ಲಿ ಹಾನಿ ಮಾಡಬಹುದು. ಸ್ತನ ಕ್ರೀಮ್ ಗಳು ಚರ್ಮಕ್ಕೆ ಒಳ್ಳೆಯದಲ್ಲದ ವಿವಿಧ ರಾಸಾಯನಿಕಗಳನ್ನು ಹೊಂದಿರುತ್ತವೆ.  

ನಿಮ್ಮ ಎದೆಯಲ್ಲಿ ಸ್ರಾವ ಇತ್ಯಾದಿಗಳು ಇದ್ದರೆ, ಸ್ತನ ತೊಟ್ಟುಗಳಲ್ಲಿ ಸಮಸ್ಯೆ ಇದ್ದರೆ, ಸ್ತನದಲ್ಲಿ ಒಂದು ರೀತಿಯ ನೋವು, ಸಾಫ್ಟ್ ನೆಸ್  ಇದ್ದರೆ, ಕೆಲವು ರೀತಿಯಲ್ಲಿ ಸ್ತನ  ಬಣ್ಣದಲ್ಲಿ ಬದಲಾವಣೆಯಾಗುತ್ತಿದ್ರೆ, ಆಗ ನಿಮಗೆ ವೈದ್ಯಕೀಯ ಸಹಾಯದ ಅಗತ್ಯವಿದೆ. ಅದನ್ನು ನಿರ್ಲಕ್ಷಿಸಬೇಡಿ, ಇದು ತುಂಬಾ ಅಪಾಯಕಾರಿ ಆಗಬಹುದು. ಸ್ತನ  ಕ್ಯಾನ್ಸರ್ನಂತಹ ಯಾವುದೇ ಸ್ಥಿತಿ ಕಂಡು ಹಿಡಿಯಲು ವೈದ್ಯಕೀಯ ಪರೀಕ್ಷೆ ಅಗತ್ಯ.  

ನಿಮ್ಮ ಸ್ತನದಲ್ಲಿ ರಕ್ತಸ್ರಾವ, ಸ್ತನ ತೊಟ್ಟುಗಳಲ್ಲಿ ಸಮಸ್ಯೆ, ಸ್ತನದಲ್ಲಿ ಒಂದು ರೀತಿಯ ನೋವು, ಸಾಫ್ಟ್ ನೆಸ್  ಇದ್ದರೆ, ಬಣ್ಣ ಬದಲಾವಣೆಯಾಗುತ್ತಿದ್ರೆ, ಆಗ ನಿಮಗೆ ವೈದ್ಯಕೀಯ ಸಹಾಯದ ಅಗತ್ಯವಿದೆ. ಅದನ್ನು ನಿರ್ಲಕ್ಷಿಸಬೇಡಿ, ಇದು ತುಂಬಾ ಅಪಾಯಕಾರಿ ಆಗಬಹುದು.  ಸ್ತನದಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದನ್ನು ಮುಚ್ಚಿಡುವ ಬಗ್ಗೆ ಯೋಚನೆ ಮಾಡೋದೆ ಬೇಡ. ಖಂಡಿತವಾಗಿಯೂ ವೈದ್ಯರೊಂದಿಗೆ ಮಾತನಾಡಿ.